About Nagarathna

Author, Lecturer, Dancer & National Award Winner.
- Website: www.NagarathnaShetti.com
- Phone: +91 9242478824
- City: Mundgod
- Degree: MA, B.Ed, Ph.D
- Email: nagarathnashetti81@gmail.com
- Working as: Lecturer in Loyola Composite PU College, Mundgod
ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿ ದಿಸೆಯಿಂದಲೇ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿರುವ ಡಾ.ನಾಗರತ್ನ ಎಸ್ ಶೆಟ್ಟಿಯವರು ಮೂಲದಿಂದಲೂ ಅತ್ಯಂತ ಚುರುಕು ಸ್ವಭಾವದವರು.ಮುಂಡಗೋಡದ ಲೊಯೋಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಇವರ ಆಸಕ್ತಿಯ ಕ್ಷೇತ್ರಗಳು ಕವನ, ಪ್ರಬಂಧ,ವಿಮರ್ಶೆ,ನೃತ್ಯ,ಭರತನಾಟ್ಯ ,ಯಕ್ಷಗಾನ, ಭಾಷಣ, ವಿಚಾರ ಸಂಕಿರಣ.....
ತಮ್ಮ ಅಪೂರ್ವ ಚಿಂತನೆಯ ಹಲವಾರು ಬರವಣಿಗೆಗಳ ಮೂಲಕ ಬಹಳಷ್ಟು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಇವರು ಕುಂದಾಪುರದ ವಡೇರಹೋಬಳಿ ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ಲೀಲಾವತಿ ವಿ.ಶೆಟ್ಟಿ ಮತ್ತು ಶ್ರೀ ಸೂರ್ಯಕಾಂತ ಎನ್ .ಶೆಟ್ಟಿಯವರ ಪುತ್ರಿ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ ಪದವಿಯನ್ನು ಪ್ರಥಮ ಸ್ಥಾನದೊಂದಿಗೆ ಚಿನ್ನದಪದಕ ಪಡೆದು ಉತ್ತೀರ್ಣರಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದಿರುತ್ತಾರೆ.ಇವರ ಸಾಹಿತ್ಯಿಕ,ಸಾಂಸ್ಕೃತಿಕ ಕ್ಷೇತ್ರದ ಸಾಧನೆಗೆ ವಿವಿಧ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.ಇತ್ತೀಚಿಗೆ ಶ್ರೀಕೃಷ್ಣ ದೇವರಾಯ ರಾಷ್ಟ್ರೀಯ ಪ್ರಶಸ್ತಿ ಹಾಗೂ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿರುವ ನಾಗರತ್ನ ಅವರು ಸರಳತೆಯ ಪ್ರತಿಬಿಂಬ. ಇವರ ಪತಿ ಶ್ರೀ ನರೇಶ ಡಿ ಶೆಟ್ಟಿಯವರು ಪುಸ್ತಕ ಪ್ರಕಾಶಕರು ಮಾತ್ರವಲ್ಲ ಕಲೋಪಾಸಕ , ಯಕ್ಷಾಭಿಮಾನಿಯೂ ಹೌದು. ತನ್ನ ಅಪಾರವಾದ, ವಾಕ್ಚಾತುರ್ಯ ಮತ್ತು ಆಳವಾದ ಅಧ್ಯಯನದ ಮೂಲಕ ವಿದ್ಯಾರ್ಥಿ ಸಮುದಾಯವನ್ನು ಮಂತ್ರಮುಗ್ಧರನ್ನಾಗಿಸುವ ನಾಗರತ್ನ ಅವರ ಸಾಹಿತ್ಯಾಸಕ್ತಿ ಬತ್ತದ ತೊರೆ.

Portfolio
Below are the Portfolio of Nagarathna
Video Gallery
Contact
You can contact Nagarathna in the below contact details
Mobile No
+91 9242478824
Email address
nagarathnashetti81@gmail.com